Home
ಸಿಂದಗಿ ಪಟ್ಟಣವು ಬಿಜಾಪೂರ ಜಿಲ್ಲೆಯಲ್ಲಿನ ಪ್ರಮುಖ ತಾಲೂಕು ಕೇಂದ್ರವಾಗಿದ್ದು ವ್ಯವಸಾಯವೇ ಮುಖ್ಯ ಕಸಬಾಗಿರುತ್ತದೆ.ಕಬ್ಬು, ಶೇಂಗಾ, ತರಕಾರಿಗಳು ಪ್ರಮುಖ ವ್ಯವಸಾಯೊತ್ಪನ್ನಗಳು ಮಧ್ಯಮ ಜನರು ಹೆಚ್ಚಾಗಿ ವಾಸಿಸುವಂತಹ ಮತ್ತು ಅಭಿವೃದ್ದಿ ಪಥದಲ್ಲಿರುವ ಪಟ್ಟಣವಾಗಿರುತ್ತದೆ.ಪಟ್ಟಣವು ಬಿಜಾಪೂರದಿಂದ ಸುಮಾರು ೬೦ ಕಿ.ಮೀ ದೂರದಲ್ಲಿದೆ.
ಪಟ್ಟಣದಿಂದ ಚಿಕ್ಕೋಡಿ ಜೇವರ್ಗಿ ರಾಷ್ಟ್ರ ಹೆದ್ದಾರಿ ನಂ. 218 ಬರುತ್ತದೆ ಮತ್ತು ಸಿಂದಗಿ ಶಹಾಪೂರ ರಾಜ್ಯ ಹೆದ್ದಾರಿ ಸಂಖ್ಯೆ ೧೬ ಈ ಎರಡು ಹೆದ್ದಾರಿಗಳು ಹಾದು ಹೋಗುವದರಿಂದ ಪಟ್ಟಣವು ತ್ವರಿತಗತಿಯಲ್ಲಿ ಬೆಳವಣಿಗೆ ಕಂಡಿದೆ. 2001 ರ ಜನಗಣತಿಯ ಪ್ರಕಾರ ಸಿಂದಗಿ ಪುರಸಭೆ ವ್ಯಾಪ್ತಿಯಲ್ಲಿ 27,732 ಜನಸಂಖ್ಯೆಯನ್ನು ಹೊಂದಿರುತ್ತದೆ. ಸಿಂದಗಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು 23 ಚುನಾಯಿತ ಸದಸ್ಯರು ಹಾಗೂ 4 ನಾಮನಿರ್ದೇಶಿತ ಸದಸ್ಯರಿರುತ್ತಾರೆ. ಸಿಂದಗಿ ಪುರಸಭೆಯ ವ್ಯಾಪ್ತಿಯು ಒಟ್ಟು 8.25 ಚದುರ ಕೀಲೋಮೀಟರ್ ಗಳಿರುತ್ತದೆ.ಸಿಂದಗಿಯಲ್ಲಿ ಪ್ರಸಿದ್ದವಾದ ಪುರಾತನ ಕಾಲದ ಸಂಗಮೇಶ್ವರ ದೇವಸ್ಥಾನವಿರುತ್ತದೆ ಹಾಗೂ ವರ್ಷಕೊಮ್ಮೆ ನಡೆಯುವ ಜಾತ್ರೆ ಸಮಯದಲ್ಲಿ ಈ ದೇವರನ್ನು ನೋಡಲು ಜನಸಾಗರವೇ ಹರಿದು ಬರುತ್ತದ
Computerisation : Properties within SindagiTMC limits have been identified & details have been collected & Computerisation of records is under progress. Citizens can avail this facility to pay property tax shortly. Birth & Death records are available online from the year 1990. Citizens can make use of this facility to register & obtain Birth & Death Certificate.
ಗಣಕೀಕರಣ : ಸಿಂದಗಿ ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1990 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ
Last Updated on: 10-01-2012 This Page is Maintained By Incharge Manager Shri S. U. Saboji (FDA)

